ತಡೆಗಟ್ಟು -
ಅಣೆಕಟ್ಟಿನ ಮೇಲು ಅಥವಾ ಕೆಳಭಾಗದಲ್ಲಿ ಅಡ್ಡ ಸುಳಿಗಳು ಪ್ರಾರಂಭವಾದಾಗ ಅವನ್ನು ತಡೆಯಲು ನಿರ್ಮಿಸುವ ಒಂದು ರಚನೆ ತಡೆಗಟ್ಟು. ಇವು ಅಣೆಕಟ್ಟಿನ ಮೇಲುಭಾಗದಲ್ಲಿ ಇದ್ದರೆ ಅದರ ತಲೆಮಟ್ಟಿದಿಂದ ಎರಡು, ಮೂರು ಅಡಿಗಳ ಕೆಳಗಿರುತ್ತವೆ; ಕೆಳಭಾಗದಲ್ಲಿದ್ದರೆ ಬೇಸಿಗೆಯ ನೀರಿನ ಮಟ್ಟದಲ್ಲಿರುತ್ತವೆ. ಅಣೆಕಟ್ಟಿನಿಂದ ಹೊರಡುವ ನಾಲೆಗಳಲ್ಲಿ ತುಂಬುವ ಗೋಡುಮಣ್ಣನ್ನು ತೆಗೆಯಲು ಅನುಸರಿಸುವ ಕ್ರಮಗಳಲ್ಲಿ ತಡೆಗಟ್ಟುಗಳ ನಿರ್ಮಾಣವೂ ಒಂದು. ನಾಲೆಯ ಅಡ್ಡಳತೆಯನ್ನು ಅದರಲ್ಲಿ ಹರಿಯುವ ನೀರಿನ ಪ್ರಮಾಣಕ್ಕೆ ಸರಿಯಾಗಿ ತೀರ್ಮಾನಿಸುವರು. ಅಡ್ಡಳತೆ ಇದಕ್ಕಿಂತ ಹೆಚ್ಚಾದರೆ ನಾಲೆಯ ನೀರು ಹರಿಯುವ ವೇಗ ಕಡಿಮೆ ಆಗುತ್ತದೆ. ಆಗ ಅದರಲ್ಲಿ ಗೋಡು ತುಂಬಿದರೆ ಅದರಲ್ಲಿ ನೀರು ಹರಿಯುವ ಭಾಗವನ್ನು ಒಂದರ ಎದುರಿಗೆ ಒಂದು ತಡೆಗಟ್ಟನ್ನು ಕಟ್ಟಿ ಕಡಿಮೆ ಮಾಡಬೇಕು. ತಡೆಗಟ್ಟುಗಳನ್ನು ಕಲ್ಲು, ಮರ, ಇಲ್ಲವೇ ಕುರುಚಲು ಗಿಡಗಳಿಂದ ಕಟ್ಟ ಬಹುದು.			(ಎಚ್.ಸಿ.ಕೆ.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ